amma foundation logo

ತಾಯಿ ಕರುಣಾಮೂರ್ತಿಯಾದರೆ ತಂದೆ ಮಗುವಿನ ರಕ್ಷಾ ಕವಚ – ಸುಧಾಕರ್ ಎಸ್ ಶೆಟ್ಟಿ

+91 9343299998

ತುಮಖಾನೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು – 577120

info@ammafoundation.com

PROJECTS SUPPLIER AND INSTALLER

Professional Successful Renewable
Energy Storage Solutions

Ut tellus dolor, dapibus eget, elementum vel, ifend cursus eleifend, elit. Aenea ifendn auctor wisi et ur na. Aliquam er at volutpat. Duis ac tuifendrpis. Ut tu ellus dolor, dapibus eget, elementum vel, curifende suseleifend.

Thomas Marker

Director of Manufacturing facilities company

about 1 1
about 1 2
130, 540

Tonnes CO2 emissions
avoided

150,041

Domestic households
served each year

2,840

Acres of land protected
by solar parks

ab 2 1
  • Satisfaction Value For Money Solution
  • Business Accounting Management
  • Inventory Management Tracking System
  • The world as it is heavily dependent
  • Reliability and performance

ಅಮ್ಮ ಫೌಂಡೇಶನ್‌

ನಮ್ಮ ಬಗ್ಗೆ

'ಮಾತೃದೇವೋಭವ-ತಾಯಿಯೇ ದೇವರು' ಎಂಬ ನಾಣ್ಣುಡಿಯಂತೆ ಒಬ್ಬ ಮನುಷ್ಯ ಸಂಸ್ಕಾರವಂತನಾಗಿ ಜಿಳೆಯುವಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದು. ತಾಯಿಯಲ್ಲಿಯೇ ದೇವರನ್ನು ಕಂಡ ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಕೊಡುಗೈ ದಾನಿ, ಸಾವಿರಾರು ಜನರ ಪ್ರೇರಕ ಶಕ್ತಿ ಶ್ರೀಯುತ ಸುಧಾಕರ ಎಸ್‌ ಶೆಟ್ಟಿಯವರ ಪ್ರೇರಕ ಶಕ್ತಿ, ಅವರ ಪೂಜ್ಯ ಮಾತೃತ್ರೀಯವರಾದ ಶ್ರೀಮತಿ ಶಾರದಮ್ಮ ಮಮತಾಮಯಿ ಮಾತೆ, ವಾತ್ಸಲ್ಯದ ಮೂರ್ತಿ, ಸಾಧನೆಗೆ ಸ್ಫೂರ್ತಿ, “ಜನಸೇವೆಯೇ ಜನಾರ್ದನ ಸೇವೆ ಕಂದ” ಎಂದು ಹಾಡುತ್ತಾ ಮಕ್ಕಳನ್ನು ಬೆಳೆಸಿದವರು ಇವರು. ಈ ಎಲ್ಲಾ ಗುಣಗಳನ್ನು ತನ್ನ ತಂದೆ ಮತ್ತು ತಾಯಿಯಿಂದ ಎರವಲಾಗಿ ಹಡೆದು ಬೆಳೆದ ಸುಧಾಕರ ಎಸ್‌ ಶೆಟ್ಟಿ ಅವರು ತಮ್ಮ ತಂದೆ-ತಾಯಿಯ ಎಲ್ಲಾ ಸೇವಾ ಕಾರ್ಯಗಳು ಅವಿರತವಾಗಿ ನಡೆಯುತ್ತಿರಲಿ ಎಂಬ ಮಹತ್ತರ ಉದ್ದೇಶ ಇರಿಸಿಕೊಂಡು ಸ್ಥಾಪಿಸಿದ್ದೇ ಈ ನಮ್ಮ “ಅಮ್ಮ ಫೌಂಡೇಶನ್‌".

ಮನವಿ

ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ

ನಾನು ತಮ್ಮೆಲ್ಲರ ಪ್ರೀತಿಯ ಸುಧಾಕರ ಎಸ್‌.ಶೆಟ್ಟಿ ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿನ ತುಮಖಾನೆ ನನ್ನ ಜನ್ಮ ಭೂಮಿ. ಶ್ರೀಯುತ ಸಂಜೀವ ಶೆಟ್ಟಿ ಹಾಗೂ ಶ್ರೀಮತಿ ಶಾರದಮ್ಮ ನನ್ನ ಹೆತ್ತವರು. ಜಮೀನುದಾರರ ಕುಟುಂಬದಲ್ಲಿ ಹುಟ್ಟಿದ್ದರೂ ವಿಧಿನಿಯಮದಂತೆ ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಹೋಟೆಲ್‌ ಕಾರ್ಮಿಕನಾಗಿ ದುಡಿಮೆ ಪ್ರಾರಂಭಿಸಿದೆ. ನನ್ನ ಹದಿನೆಂಟನೆಯ ವಯಸ್ಸಿನಲ್ಲೆ (1976) ಸ್ವಂತ ಹೋಟೆಲ್‌ ಮಾಲೀಕನಾದ ನಾನು ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ನನ್ನ ಕರ್ಮಭೂಮಿಯಾಗಿಸಿಕೊಂಡು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಲವು ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿ ಉದ್ಯಮಿಯಾಗಿ ಬೆಳೆದು, ಈಗ ಜನಸೇವೆ ಮಾಡುವ ಮಹತ್ತರ ಉದ್ದೇಶವನ್ನಿರಿಸಿ ಕೊಂಡು ಪುನ: ನನ್ನ ಹೆತ್ತೂರಿಗೆ ಮರಳಿದ್ದೇನೆ.

vinay guruji

ವಿನಯ್ ಗುರೂಜಿ

ಸಮಾಜದ ಶಕ್ತಿಯಾಗಲಿ

ತಾಯಿಯೇ ದೇವರು ಎಂದು ಪೂಜಿಸುವ ನೆಲೆ ನಮ್ಮದು. ಜನ್ಮ ನೀಡುವುದು ಮಾತ್ರವಲ್ಲ, ಜನ್ಮ ಸಾರ್ಥಕವನ್ನು ಪಡೆಯಲು ಬೇಕಿರುವ ಸಂಸ್ಕಾರವನ್ನು ನೀಡುವುದೂ ತಾಯಿಯೇ. ತಾಯಿಯಾದವಳು ತನ್ನ ಮಕ್ಕಳನ್ನು ನಿಸ್ವಾರ್ಥಿಯಾಗಿ, ಸಮಾಜಮುಖಿಯಾಗಿ ರೂಪಿಸಿದರೆ ಪ್ರತೀ ಸಮಾಜದಲ್ಲೂ ಅವರು ಶಕ್ತಿಯಾಗಿ ನಿಲ್ಲಬಲ್ಲರು ಎನ್ನುವುದಕ್ಕೆ
ಶ್ರೀಮತಿ. ಶಾರದಮ್ಮನವರು ತಮ್ಮ ಮಕ್ಕಳನ್ನು ಬೆಳೆಸಿರುವ ರೀತಿಯು ಎಲ್ಲರಿಗೂ ಮಾದರಿಯಾಗಿದೆ.

ಇತರರನ್ನು ಮೇಲೆತ್ತಿಬೆಳೆಸುವ ಶಶ್ತಿ - ನಮ್ಮ ಶೆಟ್ರು

ಸುಧಾಕರ ಶೆಟ್ಟರ ಸಾಮಾಜಿಕ ಕಳಕಳಿ, ಕಾರ್ಯತತ್ಪರತೆ, ಕೆಲಸದಲ್ಲಿರುವ ಶ್ರದ್ಧೆ, ಮಾಡುವ ಕಾರ್ಯದ ಬಗೆಗಿನ ಬದ್ಧತೆ, ಸ್ನೇಹ ಪರತೆ, ಶ್ರಮಪಡುವ ರೀತಿ, ದೂರದೃಷ್ಟಿ ಇರುವ ಚಿಂತನೆಗಳು ಇವುಗಳನ್ನೆಲ್ಲ ದೂರದಿಂದ ಗಮನಿಸಿದ ನನಗೆ ಅವರ ಅಭಿಮಾನಿಯಾಗದೇ ಇರಲು ಸಾಧ್ಯವೇ ಆಗಲಿಲ್ಲ. ಅಮ್ಮ ಫೌಂಡೇಶನ್‌ ವತಿಯಿಂದ ಶಾನುವಳ್ಳಿ ಗ್ರಾಮದ ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಕರೋನಾ ಲಾಕ್‌ಡೌನ್‌ ಕಾರಣ ಶಾಲೆಗೆ ಹೋಗದೆ ಆಸಕ್ತಿ ಕಳೆದುಕೊಂಡ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ವಿದ್ಯಾಭ್ಯಾಸ ಮುಂದುವರಿಸುವಂತೆ ಮನವೊಲಿಸಲಾಯಿತು. – ವಿನಯ್‌ ಕಣಿವೆ ಜೆ.ಡಿ.ಎಸ್‌. ಪ್ರಚಾರ ಸಮಿತಿ ಅಧ್ಯಕ್ಷರು, ಶೃಂಗೇರಿ ಕ್ಷೇತ್ರ 4
Amma_Foundation_Kannada_logo 1
80+

ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ಡಾಗಿ

ಜ್ಞಾನ ಸರೋವರ

80+

ಆಹಾರ ಅಕ್ಷಯ

ಅನ್ನಬ್ರಹ್ಮ

80+

ಆರೋಗ್ಯವೇ ಭಾಗ್ಯ

ನೊಂದವರ ಬಂಧು

80+

ಕ್ರೀಡಾ ಕಾರಂಜಿ

ಎಲೆ ಮರೆಯ ಕಾಯಿಗಳಿಗೆ ಸ್ಪೂರ್ತಿ

ಅಮ್ಮ ಕಾರ್ಯಕ್ರಮದ ಬಗ್ಗೆ ಶ್ಲಾಘನೆ

ಶ್ರೀ ಮಂತಿಕೆ, ಹಣ, ಅಧಿಕಾರ, ಅಂತಸ್ತು ಎಲ್ಲರಿಗೂ ಬರಬಹುದು. ಆದರೆ ಅದನ್ನು ಸಮಾಜದ ಒಳಿತಿಗಾಗಿ ಬಳಸುವ ಮನಸ್ಸು ಮಾತ್ರ ಕೆಲವರಿಗೆ ಬರುತ್ತದೆ.ಸ. ಸಧಾಕರ ಶೆಟ್ರು ರಾಜಕೀಯವನ್ನು ಮೈಸೂರಿನಲ್ಲಿಯೇ ಮಾಡಬಹುದಿತ್ತು. ಆದರೆ ತನ್ನ ಹುಟ್ಟೂರಿನ ಬಗ್ಗೆ ಇರುವ ಅಪಾರವಾದ ಪ್ರೀತಿಯಿಂದ ತನ್ನ ತವರಿನ ಕ್ಷೇತ್ರದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ತಮ್ಮ ತಾಯಿಯವರ ನೆನಪಿನಲ್ಲಿ ಸ್ಥಾಪಿತವಾಗಿರುವ ಅಮ್ಮ ಫೌಂಡೇಶನ್‌ ಮುಖಾಂತರ ಸಹಾಯ ಹಸ್ತ ಚಾಚಿರುವ ಕಾರ್ಯ ಶ್ಲಾಘನೀಯ ಮತ್ತು ಅನುಕರಣೀಯ.

ರಾಜೇಂದ್ರ

ಮಾಡಬೂರ್‌
quote icon

ಕೊಪ್ಪ ತಾಲೂಕಿನ ಶಾನುವಳ್ಳಿ ಪಂಚಾಯಿತಿಯ ತುಮಖಾನೆ ಊರಿನವರಾದ ಶ್ರೀಯುತ ಸುಧಾಕರ ಶೆಟ್ಟಿಯವರು ಮೂಲತಃ ಕೃಷಿಕರಾಗಿದ್ದು, ನಂತರ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಬೆಳೆದವರು. ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಛಲದಿಂದ ಈ ರಾಜ್ಯದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯ ಜೊತೆಗೆ ಹಲವಾರು ಉದ್ಯಮಗಳನ್ನು ಸ್ಥಾಪಿಸಿ ಕರ್ನಾಟಕ ರಾಜ್ಯದ ಅಸಂಖ್ಯಾತ ಯುವಕ ಯುವತಿಯರಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಪ್ರಸ್ತುತ ರಾಜ್ಯದ ಅಗ್ರಗಣ್ಯ ಉದ್ಯಮಿಗಳಲ್ಲೊಬ್ಬರಾಗಿದ್ದಾರೆ.

ಹೆಚ್‌.ಜಿ. ವೆಂಕಟೇಶ್‌

ಮಣಿಪುರ ಎಸ್ಟೇಟ್‌
quote icon

ಇತ್ತೀಚಿನ ಸುದ್ದಿ